ರಾಧೆ ದೇವಿಯವರು ಭಾರತೀಯ ವಧುವಿನ ಉಡುಗೆ ವಿನ್ಯಾಸಕಿ ಮತ್ತು ಸಾಮಾಜಿಕ ಕಾರ್ಯಕರ್ತೆ. ಅವರು ಕಲಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಅವರಿಗೆ ೨೦೨೧ ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು. == ಆರಂಭಿಕ ಜೀವನ == ರಾಧೆ ದೇವಿಯವರು ಮಣಿಪುರದ ತೌಬಲ್ ಜಿಲ್ಲೆಯ ವಾಂಗ್‌ಜಿಂಗ್ ಸೊರೊಖೈಬಾಮ್ ಲೈಕೈ ಮೂಲದವರು. == ವೃತ್ತಿ == ರಾಧೆ ದೇವಿಯವರು ತಮ್ಮ ೨೫ ನೇ ವಯಸ್ಸಿನಲ್ಲಿ ಪೊಟ್ಲೋಯ್ ಪ್ರಕ್ರಿಯೆಯ ಕಲಿಕೆಯ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಖಂಬಾ-ತೊಯ್ಬಿ ನೃತ್ಯಕ್ಕಾಗಿ ವೇಷಭೂಷಣಗಳನ್ನು ವಿನ್ಯಾಸಗೊಳಿಸಿದ್ದಾರೆ. ಅವರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತಿದ್ದಾರೆ. == ಪ್ರಶಸ್ತಿಗಳು == ೨೦೨೧ ರಲ್ಲಿ ಪದ್ಮಶ್ರೀ == ಉಲ್ಲೇಖಗಳು ==